Policy

  • ಜನನ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಲ್ಕೆತ್ಯಾರು.ಇಬ್ರಾಹೀಂ ಅವ್ವಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ ಎರಡನೆಯವರು.29 ಜುಲೈ 1987 ರಲ್ಲಿ ಜನನ.ಮಂಗಳೂರು ತಾಲೂಕಿನ ಅಡ್ಡೂರು ಎಂಬಲ್ಲಿ ವಾಸ.
  • ಧಾರ್ಮಿಕ ಜ್ಞಾನ:ದಾರುಲ್ ಇರ್ಶಾದ್ ಮಾಣಿಯಲ್ಲಿ 7 ವರ್ಷ ದರ್ಸ್ ವ್ಯಾಸಂಗ ಬಳಿಕ ಮೂರು ವರ್ಷ ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇಲ್ಲಿ ಸಅದಿ ಮತ್ತು ಅಫ್ಳಲಿ ಬಿರುದು ಪ್ರಥಮ ರ್ಯಾಂಕ್ ನೊಂದಿಗೆ ತೇರ್ಗಡೆ.
  • ಶಾಲಾ ವಿದ್ಯಾಭ್ಯಾಸ:ಎಸ್.ಎಸ್.ಎಲ್.ಸಿ ,ಇದೀಗ ಮೌಲಾನ ಅಝಾದ್ ನೇಷನಲ್ ಉರ್ದು ಯುನಿವರ್ಸಿಟಿ ಹೈದರಾಬಾದ್ ನಿಂದ ಅರಬಿಕ್ ಎಂ.ಎ ಮಾಡುತ್ತಿದ್ದಾರೆ.
  • ಸೇವೆ: ದಾರುಲ್ ಇರ್ಶಾದ್ ಕೆ.ಜಿ.ಎನ್ ದಅವಾ ಕಾಲೇಜಿನಲ್ಲಿ ಏಳು ವರ್ಷ ಮುದರ್ರಿಸ್, ಮಜ್ಲಿಸ್ ಗಾಣೆಮಾರ್ ನಲ್ಲಿ 3 ವರ್ಷ ಮುದರ್ರಿಸ್, ಪ್ರಸ್ತುತ ಶಾದುಲೀ ಮಸ್ಜಿದ್ ಉಪ್ಪಳ್ಳಿ ಚಿಕ್ಕಮಗಳೂರುವಿನಲ್ಲಿ ಖತೀಬ್ ಮತ್ತು ಮುದರ್ರಿಸಾಗಿದ್ದಾರೆ.
  • ಪುಸ್ತಕಗಳು: ಉಮ್ರಾನುಭವ, ಖಸೀದತುಲ್ ಬುರ್ದಾ ಕನ್ನಡಾನುವಾದ,ಮೌಲಿದಾಚರಣೆ,ತಾಜುಲ್ ಉಲಮಾ ಮೌಲಿದ್,ತಖ್ಮೀಸುಲ್ ಖಸೀದತಿನ್ನುಅಮಾನಿಯ್ಯ, ಇಮಾಂ ಅಬೂಹನೀಫ,ಪ್ರೇಮಾನುಭವ ಉಮ್ರಾ ಗೈಡ್, ಹಜ್ಜ್ ಗೈಡ್ ಸಹಿತ ಕನ್ನಡ ಮತ್ತು ಅರಬಿಕ್ ನಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.ಜೊತೆಗೆ ಹಲವು ಪ್ರಮುಖ ಪತ್ರಿಕೆಗಳಲ್ಲಿ ಬರೆಯುತ್ತಾರೆ.
  • ತರಗತಿಗಳು: ದಿನಾಂಕ 15 ಮಾರ್ಚ್ 2016 ರಂದು ಆರಂಭಿಸಿದ ಇಫಾದ ಹದೀಸ್ ಕ್ಲಾಸ್ ಎಡೆಬಿಡದೆ ದೈನಂದಿನ ಮುಂದುವರಿಯುತ್ತಿದೆ.ಅಲ್ಲದೆ ಇತರ ಅನೇಕಾರು ಅಧ್ಯಯನಾತ್ಮಕ ತರಗತಿಗಳು ನಡೆಯುತ್ತಿವೆ.
  • ಪ್ರವಾಸ:ಸೌದಿ ಅರೇಬಿಯ,ಯು.ಎ.ಇ, ಒಮಾನ್